ಅಧಿಸೂಚನೆssss

ಸಂಘದ ಸ್ಥಾಪನೆ

ಡಾ|| ಬಿ.ಆರ್. ಅಂಬೇಡ್ಕರ್‍ರವರ ಜನ್ಮ ಶತಾಬ್ದಿಯ ಅಂಗವಾಗಿ ನಾಲ್ಕು ವಸತಿ ಶಾಲೆಗಳನ್ನು ಕೇಂದ್ರ ನವೋದಯ ಮಾದರಿಯಲ್ಲಿ ಕಂದಾಯ ವಿಭಾಗಕ್ಕೆ ಒಂದರಂತೆ 1994ರಲ್ಲಿ ಪ್ರಾರಂಭಿಸಲಾಯಿತು.

ತದನಂತರದ ವರ್ಷಗಳಲ್ಲಿ ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮಂಜೂರು ಮಾಡಲಾಗಿದೆ.

ಎಲ್ಲಾ ವಸತಿ ಶಾಲೆಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಸಂಘವನ್ನು ಸ್ಥಾಪಿಸಲಾಯಿತು ಹಾಗೂ ಸಂಘವು ಫೆಬ್ರವರಿ 2000 ರಿಂದ ಕಾರ್ಯಾರಂಭ ಮಾಡಿದೆ.

ಸಂಘದ ಉದ್ದೇಶ

ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆಥಿ೯ಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ವಗ೯, ಹಿಂದುಳಿದ ವಗ೯ ಮತ್ತು ಅಲ್ಪಸಂಖ್ಯಾತ ವಗ೯ಗಳ ಪ್ರತಿಭಾವಂತ ವಿದ್ಯಾಥಿ೯ಗಳಿಗೆ ಉತ್ತಮ ಗುಣಮಟ್ಟದ ವಸತಿ ಶಿಕ್ಷಣ ನೀಡುವ ಘನ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಕನಾ೯ಟಕ ರಾಜ್ಯ ಸಕಾ೯ರದ ಅಡಿಯಲ್ಲಿ ಕೇಂದ್ರ ಸಕಾ೯ರದ ಜವಾಹರ್ ನವೋದಯ ವಸತಿ ಶಾಲೆಗಳ ಮಾದರಿಯಲ್ಲಿ ಮೊರಾಜಿ೯ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ/ ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಪ್ರಾರಂಭದಲ್ಲಿ ಸಾವ೯ಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವಗ೯ಗಳ ಕಲ್ಯಾಣ ಇಲಾಖೆ, ಗಿರಿಜನರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹೀಗೆ ವಿವಿಧ ಇಲಾಖೆಗಳ ಅಡಿಯಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ವಸತಿ ಶಾಲೆಗಳನ್ನು ಪ್ರಾರಂಭಿಸಿ, ಆಯಾ ಇಲಾಖೆಯ ಲೆಕ್ಕ ಶೀಷಿ೯ಕೆಗಳ ಅವುಗಳ ನಿವ೯ಹಣೆ ಮಾಡಲಾಗುತ್ತಿತ್ತು. 2001-02 ನೇ ಸಾಲಿನಿಂದ ಈ ಎಲ್ಲಾ ವಸತಿ ಶಾಲೆಗಳ ನಿವ೯ಹಣೆಯನ್ನು ಹೊಸದಾಗಿ ಸ್ಥಾಪಿಸಿದ “ಕನಾ೯ಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು” ಇವರಿಗೆ ವಹಿಸಲಾಯಿತು.

ಗುರಿ ಮತ್ತು ಉದ್ದೇಶಗಳು

ಅಕ್ಷರದಿಂದ ಅರಿವು ಪ್ರಜ್ಞೆ ಮತ್ತು ಅಭಿವೃದ್ದಿ ಸಾಧ್ಯವೆಂಬುದು ನಿಸ್ಸಂದೇಹ. ದೇಶದಲ್ಲಿರುವ ಎಲ್ಲಾ ವಗ೯, ಜಾತಿ ಜನಾಂಗದ ಎಲ್ಲಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕೆ ಎಲ್ಲಾ ನಾಗರೀಕರಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಒದಗಿಸುವ ಭರವಸೆಯನ್ನು ಸಂವಿಧಾನದಲ್ಲಿ ನೀಡಿದೆ. ಸಮಾಜದಲ್ಲಿ ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ವಗ೯ ಅಲ್ಪಸಂಖ್ಯಾತರು ಮತ್ತು ಇತರೆ ಹಿಂದುಳಿದ ವಗ೯ದವರ ಶಿಕ್ಷಣಕ್ಕಾಗಿ ವಿಷೇಶ ಕಾಯ೯ಕ್ರಮಗಳನ್ನು ರೂಪಿಸಿ ಜಾರಿಗೊಳಿಸಲು ಸಂವಿಧಾನದಲ್ಲಿ ಅವಕಾಶವಿದೆ. ಈ ಕಾಯ೯ಕ್ರಮದ ಅಂಗವಾಗಿ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ವಗ೯ ಅಲ್ಪಸಂಖ್ಯಾತ ವಗ೯ಗಳ ಪ್ರತಿಭಾವಂತ ವಿದ್ಯಾಥಿ೯ಗಳಿಗೆ ಉತ್ತಮ ಗುಣಮಟ್ಟದ ವಸತಿ ಸಹಿತ ಉಚಿತ ಶಿಕ್ಷಣ ನೀಡುವ ಘನ ಉದ್ದೇಶದಿಂದ ರಾಜ್ಯ ಸಕಾ೯ರದ ವತಿಯಿಂದ ನವೋದಯ ಮಾದರಿ/ ಮೊರಾಜಿ ೯ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ .